Wednesday, July 1, 2009

ಕಾರಿಂಜದಲ್ಲಿ ದೃಢಕಲಶಾಭಿಶೇಕ

ಕುಂಬಳೆ:
ಇಚ್ಲಂಪಾಡಿ ಕಾರಿಂಜ ಮಹಾದೇವ ಶಾಸ್ತಾರ ಕ್ಷೇತ್ರದಲ್ಲಿ ದೇಲಂಪಾಡಿ ಬಾಲಕೃಷ್ಣ ತಂತ್ರಿಗಳ ನೇತೃತ್ವದಲ್ಲಿ ಜುಲಾಯಿ ಮೂರರಂದು ಶುಕ್ರವಾರ ದೃಢಕಲಶಾಭಿಶೇಕ ಕಾರ್ಯಕ್ರಮ ಜರಗಲಿದೆ. ಆ ದಿನ ಪ್ರಾತಃಕಾಲ ಪೂಜೆ, ಬೆಳಗ್ಗೆ ೯ ಗಂಟೆಯ ನಂತರ ಕಲಶಪೂಜೆ, ದೃಢಕಲಶಾಭಿಷೇಕ, ಮಧ್ಯಾಹ್ನದ ೧೨ಕ್ಕೆ ಮಹಾಪೂಜೆ, ಮಂಗಳಾರತಿ, ಪ್ರಸಾದ ವಿತರಣೆ, ಅನ್ನಸಂತರ್ಪಣೆ, ರಾತ್ರಿ ೮ಕ್ಕೆ ವಿಶೇಷ ದೀಪಾಲಂಕೃತ ಕಾರ್ತಿಕಪೂಜೆ, ಪ್ರಸಾದ ವಿತರಣೆ ಜರಗಲಿರುವುದು.ಕುಂಬಳೆ ಸತ್ಯದ ಸೀಮೆ ಇಚ್ಲಂಪಾಡಿ ಧರ್ಮದ ಚಾವಡಿಯ ಆರಾಧ್ಯ ದೇವರುಗಳಾದ ಶ್ರೀ ಮಹಾದೇವ ಶಾಸ್ತಾರರ ಕ್ಶೇತ್ರ ಕಾರಿಂಜದಲ್ಲಿ ಪ್ರಕೃತಿ ರಮಣೀಯ ಸ್ಥಳದಲ್ಲಿದೆ. ವಿವಿಧ ತಾಂತ್ರಿಕ, ವೈದಿಕ, ಧಾರ್ಮಿಕ ಹಾಗೂ ಸಾಸ್ಕೃತಿಕ ಕಾರ್ಯಕ್ರಮಗಳೊಂದಿಗೆ ಮೇ ತಿಂಗಳ ೧೨ರಿಂದ ೨೦ರ ತನಕ ಬಹಳ ವಿಜೃಂಭಣೆಯಾಗಿ ಪುನಃಪ್ರತಿಷ್ಟಾ ಅಷ್ಟಬಂಧ ಬ್ರಹ್ಮಕಲಶಾಭಿಷೇಕ ಕಾರ್ಯಕ್ರಮಗಳು ಜರಗಿದ್ದವು. ಪ್ರತಿಷ್ಟೆಯಾಗಿ ನಲವತ್ತೆಂಟನೇ ದಿನ ಈ ದೃಢಕಲಶ ನಡೆಯಲಿಕ್ಕಿದೆ. ಕಾರಿಂಜ ಯಕ್ಷಗಾನ ಮೇಳ ಶತಮಾನದ ಹಿಂದೆ ಕುಂಬಳೆ ಸೀಮೆಯಲ್ಲಿ ಪ್ರಸಿದ್ಧವಾಗಿತ್ತು. ಕಾರಿಂಜ ದೇವಳದಲ್ಲಿ ಪ್ರಾಥಮಿಕ ವಿದ್ಯಾಭ್ಯಾಸ ಕೂಡಾ ಕೆಲವು ವರ್ಷಗಳು ನಡೆದಿತ್ತು ಹಾಗೂ ಕ್ಷೇತ್ರವು ಇಲ್ಲಿನ ಜನಜೀವನದ ಅಭಿವೃದ್ಧಿಯ ಸೋಪಾನ ಹಾಕಿತ್ತು. ಕೃಷಿ ಪ್ರಧಾನವಾದ ಈ ಕ್ಷೇತ್ರ ನಾಯ್ಕಾಪಿನಿಂದ ಐ.ಸಿ. ರೋಡಿನ ಮುಖಾಂತರ ಮೂರು ಕಿ.ಮೀ. ದೂರದಲ್ಲಿದೆ.ಮಧ್ಯಾಹ್ನದ ಕಾರ್ಯಕ್ರಮಗಳ ನಂತರ ಅಪರಾಹ್ನ ಮೂರರಿಂದ ಬ್ರಹ್ಮಕಲಶ ಸಮಿತಿ, ಉಪಸಮಿತಿಗಳ ವಿಶೇಷ ಸಭೆ ನಡೆಯಲಿದ್ದು ಕಾರ್ಯಕರ್ತರೆಲ್ಲರೂ ಸಭೆಯಲ್ಲಿ ಭಾಗವಹಿಸಬೇಕೆಂದು ಬ್ರಹ್ಮ ಕಲಶಾಭಿಷೇಕ ಸಮಿತಿಯ ಅಧ್ಯಕ್ಷ ಅಡ್ವಕೇಟ್ ಬಿ. ಸುಬ್ಬಯ್ಯ ರೈ ವಿನಂತಿ ಮಾಡಿಕೊಂಡಿರುತ್ತಾರೆ. ಭಗವದ್ಭಕ್ತರೆಲ್ಲರೂ ಧೃಢಕಲಶದ ಕಾರ್ಯಕ್ರಮಗಳಲ್ಲಿ ಸಕ್ರಿಯವಾಗಿ ಭಾಗವಹಿಸಿ ಶ್ರೀದೇವರ ಪ್ರಸಾದ ಸ್ವೀಕರಿಸಬೇಕಾಗಿ ಅಧಿಕೃತರು ಅಪೇಕ್ಷಿಸಿರುತ್ತಾರೆ.

No comments:

Post a Comment